ಹನುಮಯ್ಯ ಹನುಮಯ್ಯ
ಹನುಮಯ್ಯ ಹನುಮಯ್ಯ, ಹನುಮಯ್ಯ ಹನುಮಯ್ಯ
ಘನಮಹಿಮನೆ ಖದರುಂಡನಿ ನಿಲಯನೆ ||ಪ||
ತತ್ವಾಧಿಪಮ ಚಿತ್ತದಿ ನೆಲೆಸಿ ನೀ ಹ್ರತ್ಕಮ ಕಲೆಯೋ ಜೀವೋತ್ತಮನೆ ನಿತ್ಯ |
ಬಪ್ಪ ಕ್ಲೇಶೌಭವ ಕ್ಷಿಪ್ರಧಿ ತಪ್ಪಿಸಿ, ಬಪ್ಪದಿ ಕಾಯೋ ಕಂದರ್ಪಜನಕಪ್ರಿ ||ಹನುಮಯ್ಯ||
ಅಂಜನೆಸುತ ಮತ ಭಂಗಿಸು ಹರಿಪದ ಕಂಜಮಧುಪ ಮ್ರತ್ಯುಂಜಯ ಪಿತನೆ |
ಕಾಳಿ ರಮಣ ಸಿರಿಲೋಲನ ಭಕ್ತರ, ಓಲಗ ಕರುಣಿಸು ಶೀಲ ಸ್ವರೂಪ ||ಹನುಮಯ್ಯ||
ಕಾಂತೇಶನೆ ರಮಾಕಾಂತ ವಿಠ್ಠಲನ ಚಿಂತನೆ ಸಂತತ ನೀಡೋ ಯತೀಂದ್ರ |
ಕಾಂತೇಶನೆ ರಮಾಕಾಂತ ವಿಠ್ಠಲನ ಚಿಂತನೆ ಸಂತತ ನೀಡೋ ಯತೀಂದ್ರ ||ಹನುಮಯ್ಯ||
Comments
Post a Comment