ಜಯತು ಜಯ ವಿಠಲ

 

ಜಯತು ಜಯ ವಿಠಲ
ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮ|| ಪ ||

ಪಾವನಾಂಗ ಪಂಡರೀನಾಥ
ಪಾದಸೇವಾ ಪುಣ್ಯವಿನೀತ |
ಕರುಣಿಸಿ ಬಾರಯ್ಯ, ದರುಶನ ತಾರಯ್ಯ
ನೀ ಎನ್ನ ಭಾಗ್ಯವಯ್ಯ
ಪಾಂಡುರಂಗ, ಪಾಂಡುರಂಗಯ್ಯ ||ಜಯತು ||

ಕನಸು ಮನಸಿನ ಜೀವವು ನೀನೆ
ಅಂತರಾತ್ಮನ ಭಾವವು ನೀನೆ |
ಅನ್ಯವು ಇಲ್ಲಯ್ಯ, ಎಲ್ಲವು ನೀನಯ್ಯ
ತುಕಾ ಎಂದ ಮಾತಿದಯ್ಯ
ಪಾಂಡುರಂಗ ಪಾಂಡುರಂಗಯ್ಯ || ಜಯತು || 

Comments

Popular Posts