ಸುಂದರಮೂರುತಿ ಮುಖ್ಯಪ್ರಾಣ
ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮ ಮನೆಗೆ
ಪ್ರಾಣ ಬಂದ ಮನೆಗೆ, ಶ್ರೀರಾಮನಾಮ ಧ್ವನಿಗೆ ||ಪ||
ಕಣಕಾಲಂದುಗೆ ಗೆಜ್ಜೆ ಝಣ ಝಣರೆನುತ
ಝಣಕು ಝಣಕುರೆಂದು ಕುಣಿಕುಣಿದಾಡುತ ||ಪ್ರಾಣ||
ತುಂಬುರು ನಾರದ ವೀಣೆ ಬಾರಿಸುತ
ಶೀರಾಮನಾಮ ಪಾಡುತ ನಲಿನಲಿದಾಡುತ ||ಪ್ರಾಣ||
ಪುರಂದರವಿಠಲನ ನೆನೆದು ಪಾಡುತಲಿ
ನೆನೆದು ಪಾಡುತಲಿ ಆಲಿಂಗನ ಮಾಡುತಲಿ ||ಪ್ರಾಣ||
Comments
Post a Comment