ಪಾರ್ವತಿ ಪಾಲಿಸೆನ್ನ
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ ।।ಪ॥
ಪಾರ್ವತಿ ಭಕ್ತರ ಸಾರಥಿ ವಂದಿಪೆ
ಸುರಪತಿ ಗಜಮುಖ ಮೂರುತಿ ಮಾತೆ ||ಅ ಪ||
ಮನದಭಿಮಾನಿಯೇ ನೆನೆವೆನು ನಿನ್ನನು
ಅನುಗ್ರಹಿಸೆನಗೆ ಅಂಬುಜ ಪಾಣಿ ।।ಪಾರ್ವತಿ।।
ಮಂಗಳೆ ಮೃಡನ ಅಂತರಂಗಳೇ ಹರಿಪಾದ
ಭೃಂಗಳೆ ತೊಂಗಳೇ ಪನ್ನಗ ವೇಣಿ ।।ಪಾರ್ವತಿ।।
ಗುಣ ಪೂರ್ಣ ವೇಣು ಗೋಪಾಲ ವಿಠಲನ
ಕರುಣಿಸಿ ಕೊಡುವ ತ್ರಿಶೂಲಿಯ ರಾಣಿ ।।ಪಾರ್ವತಿ।।
Comments
Post a Comment