ತಪ್ಪು ನೋಡದೆ ಬಂದೆಯಾ

 

ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ

ತಪ್ಪು ನೋಡದೆ ಬಂದೆಯಾ ||ಪ||


ಅಪ್ಪ ತಿರುವೆಂಕಟೇಶ ನಿರ್ಧೋಷನೇ ||ಅ ಪ||


ಆ ಪಾದ ಮೌಳಿ ಎನ್ನೋಳು ಅಘ ಬಹಳ |

ಶ್ರೀಪತಿ ಕಾಯ್ದೆಯಾ ಉದಧಿದ್ದೆಯಾ ||ತಪ್ಪು||


ಜಗದಘಹರನೆಂಬೊ ನಿನ್ನಯ ಬಿರುದು |

ತ್ರಿಗುಣಾತೀತನೆ ರಾಮನೆ ಗುಣಧಾಮನೆ ||ತಪ್ಪು||


ಇಂದೆನ್ನ ಕಲುಷವಾರಿಸೊ ಭವತಾರಿಸೋ |

ಪ್ರಸನ್ನವೆಂಕಟ ರಮಣಾ ಭಯ ಶಮನಾ ||ತಪ್ಪು||

Comments

Popular Posts