ಶ್ರೀ ಮಹಾಲಿಂಗೇಶ್ವರ ಪ್ರಸನ್ನ
ಅಂಬಾತನಯ ಹೇ ಹೇರಂಬ
ಕರುಣಾಂಬುಧಿ ತವ ಚರಣಾಂಬುಜಕೆರಗುವೆ ।।ಪ।।
ದಶನ ಮೋದಕ ಪಾಶಾಂಕುಶ ಪಾಣಿ
ಅಸಮ ನೀ ಚಾರುದೇಷ್ಣ ವಂದಿಪೆ ।।ಅಂಬಾತನಯ।।
ವೃಂದಾರಕವೃಂದ ವಂದಿತ ಚರಣಾರ-
ವಿಂದಯುಗಳ ದಯದಿಂದ ನೋಡೆನ್ನ ।।ಅಂಬಾತನಯ।।
ಯೂಥಪವದನ ಪ್ರದ್ಯೋತಸನ್ನಿಭ
ಜಗನ್ನಾಥವಿಠಲನ ಸಂಪ್ರೀತಿ ವಿಷಯ ಜಯ ।।ಅಂಬಾತನಯ।।
Comments
Post a Comment