ಹೂ ಬೇಕೇ ಪರಿಮಳದ

 

ಹೂ ಬೇಕೇ ಪರಿಮಳದ

ಪರಮ ಪುರುಷ ನಮ್ಮ ಕೃಷ್ಣನ ತೋಟದ

ಹೂ ಬೇಕೇ ಪರಿಮಳದ ॥ ಪ॥


ದಾರದಿ ಕಟ್ಟಿಲ್ಲ,  ಮಾರು ಹಾಕುವುದಲ್ಲ

ಕೇರಿ ಕೇರಿಗಳಲ್ಲಿ ಮಾರುವುದಲ್ಲ |

ಭೂರಿ ಭಕುತಿಯೆಂಬ ಭಾರಿಯ ಬೆಳಗಿದ

ಮಾರೆಂದು ಪೇಳಿದ ಶೌರಿಯ ಸೊಬಗಿನ ।।ಹೂ ಬೇಕೇ।।


ರಂಗು ರಂಗುಗಳಿಂದ ಕಂಗೊಳಿಸುವ ಸ್ವಚ್ಛ

ಬಂಗಾರದ ಛವಿ ಭಂಗಿಸುವ |

ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ

ಅಂಗ್ರಿಯ ಸಂಗದಿ ಮಂಗಳಕರವಾದ ।।ಹೂ ಬೇಕೇ।।

Comments

Popular Posts