ಯಾಕೆ ಮೂಕನಾದ್ಯೋ

 

ಯಾಕೆ ಮೂಕನಾದ್ಯೋ ಗುರುವೇ 

ನೀನ್ಯಾಕೆ ಮೂಕನಾದ್ಯೋ                            ।।ಪ।।


ಯಾಕೆ ಮೂಕನಾದಿ ಲೋಕಪಾಲಕ ಎನ್ನ 

ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ       ।।ಅ.ಪ।।


ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ

ಮಂದಿಯೊಳಗೆನ್ನ ಮಂದನ್ನ ಮಾಡಿದ್ಯೂ ।

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ

ಕಾಕುಜನರೊಳೆನ್ನ ನೂಕಿಬಿಟ್ಟು ನೀನು              ।।ಯಾಕೆ।।


ಹೀಂಗೆ ಪಾಲಿಸಿದರೆ ಯೋಗಿಕುಲವರ್ಯ ರಾಗ

ವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ |

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ

ಘನ್ನಮಹಿಮ ನೀ ಎನ್ನನು ಬಿಟ್ಟೀಗ                    ।।ಯಾಕೆ।।


ಜನನಿಯು ನೀ ಎನ್ನ ಜನಕನಯ್ಯ

ಮನ್ನಿಸೊ ನೀ ನಿತ್ಯಾನನ್ಯ ಶರಣನೆ    ।।ಯಾಕೆ।।


ಎಂದಿಗಾದರು ನಿನ್ನ ಪೊಂದಿಕೊಂಡವನೆಲೊ

ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೊ |

ನಾಥನು ನೀ ಅನಾಥನು ನಾನಯ್ಯ

ಪಾತಕರರಿ ಜಗನ್ನಾಥವಿಠಲದಾಸ                     ।।ಯಾಕೆ।।

Comments

Popular Posts