ಬಿಡುವೇನೇನಯ್ಯ ಹನುಮ

 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ, 
ಸುಮ್ಮನೆ ಬಿಡುವೇನೇನಯ್ಯ ||ಪ.||

ಬಿಡುವೆನೇನು ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಒಡೆಯನಲ್ಲಿ ಜ್ಞಾನ ಭಕ್ತಿ ಕೊಡುವ ತನಕ ಸುಮ್ಮನೇ ನಾನು ||ಅ.ಪ.||

ಹಸ್ತವನ್ನು  ಎತ್ತಿದರೇನು ಹಾರಗಾಲನು ಇಟ್ಟರೇನು
ಭೃತ್ಯನೋ ನಿನ್ನವನು ನಾನು, ಹಸ್ತಿವರದನ ತೋರುವ ತನಕ ||ಬಿಡುವೇನೇನಯ್ಯ||

ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇ ನಿನಗೆ ನಾನು|
ಫುಲ್ಲನಾಭನಲ್ಲಿ ಎನ್ನ, ಮನಸ ನೀ ನಿಲ್ಲಿಸೊ ತನಕ  ||ಬಿಡುವೇನೇನಯ್ಯ||

ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ|
ಕಿಂಕರ ನಿನ್ನವನು ನಾನು, ಪುರಂಧರ ವಿಠಲನ ತೋರುವ ತನಕ ||ಬಿಡುವೇನೇನಯ್ಯ||

Comments

Popular Posts