ಜಗದೋದ್ಧಾರನ
ಜಗದೋದ್ಧಾರನ ಆಡಿಸಿದಳೆಶೋದೆ |
ಜಗದೋದ್ಧಾರನ ||ಪ||
ಜಗದೋದ್ಧಾರನ ಮಗನೆಂದು ತಿಳಿಯುತ |
ಸುಗುಣಾಂತ ರಂಗನ ಆಡಿಸಿದಳೆಶೋದೆ ||ಅ ಪ||
ನಿಗಮಕೆ ಸಿಲುಕದ ಅಗಣಿತ ಮಹಿಮನ |
ಮಗುಗಳ ಮಾಣಿಕ್ಯನ ಆಡಿಸಿದಳೆಯಶೋದೆ ||ಜಗದೋದ್ಧಾರನ||
ಅಣೋರಣೀಯನ, ಮಹತೋ ಮಹೀಯನ |
ಅಪ್ರಮೇಯನ ಆಡಿಸಿದಳೆಶೋದೆ ||ಜಗದೋದ್ಧಾರನ||
ಪರಮ ಪುರುಷನ, ಪರವಾಸುದೇವನ |
ಪುರಂದರ ವಿಠಲನ ಆಡಿಸಿದಳೆಶೋದೆ ||ಜಗದೋದ್ಧಾರನ||
Comments
Post a Comment