ವಿಠಲಯ್ಯಾ ವಿಠಲಯ್ಯ

 

ತಟಿತ್ಕೋಟಿನಿಭಗಾಯ ಜಗನ್ನಾಥ ವಿಠಲಯ್ಯಾ ವಿಠಲಯ್ಯ |

ವಿಠಲಯ್ಯ ವಿಠಲಯ್ಯ ಹರಿ ವಿಠಲಯ್ಯ ವಿಠಲಯ್ಯ ಜಯ ವಿಠಲಯ್ಯ ವಿಠಲಯ್ಯ..||


ಭಜಿಸುವೆ ನಿನ್ನನು ಅಜಭವ ಸುರನುತ|

ಭಜಕಾಮರತರು ಕುಜನ ಕುಠಾರಾ ||ವಿಠಲಯ್ಯ||


ನೀ ಕರುಣಿಸದೆ ನಿರಾಕರಿಸಲು ಎನ್ನ

ಸಾಕುವರಾರು ದಯಾಕರ ಮೂರುತಿ ||ವಿಠಲಯ್ಯ|| 


ಶರಣಾಗತರನು ಪೊರೆವನೆಂಬ ತವ

ಬಿರಿದು ಕಾಯೋ ಕರಿವರದ ಜಗನ್ನಾಥ ||ವಿಠಲಯ್ಯ||


ಹಗಲು ನಿನ್ನ ನೆನೆಯಲಿಲ್ಲ ಹಸಿವೆ ದೆಸೆಯಿಂದ |

ಇರುಳು ನಿನ್ನ ನೆನೆಯಲಿಲ್ಲ ನಿದ್ರೆಯ ಭರದಿಂದ |

ಎರಡರ ಬಾದೆಗೆ ನಾ ಒಳಗಾದೆನು ಪುರಂದರ ವಿಠಲ ||ವಿಠಲಯ್ಯ||


ಹಾಡಿದರೆ ಎನ್ನೊಡೆಯನ ಹಾಡುವೆ ಬೇಡಿದರೆ ಎನ್ನೊಡೆಯನ ಬೇಡುವೆ |

ಒಡೆಯಗೆ ಒಡಲನು ತೋರುವೆ ಎನ್ನ ಬಡತನ ಭಿನ್ನಗ ಮಾಡುವೆ |

ಒಡೆಯ ಪುರಂದರವಿಠಲ ರಾಯನ, ಅಡಿಗಡಿಗೆ ನಾ ಎರಗುವೆ ||


ಇಂದಿನ ದಿನವೇ ಶುಭದಿನವು.

 ಇಂದಿನ ವಾರ ಶುಭವಾರ... 

ಇಂದಿನ ತಾರೆ ಶುಭತಾರೆ....

ಇಂದಿನ ಕರಣ ಶುಭಕರಣ..

ಇಂದಿನ ಯೋಗ ಶುಭಯೋಗ.. 

ಇಂದಿನ ಲಗ್ನ ಶುಭಲಗ್ನ...

ಇಂದು ಪುರಂದರ ವಿಠ್ಠಲರಾಯನ ನೆನೆಸಿದ ದಿನವೇ ಶುಭದಿನವು

ಭಜಿಸಿದ ದಿನವೇ ಶುಭದಿನವು..|| ವಿಠಲಯ್ಯ||

Comments

Popular Posts