ಶಿವನು ಭಿಕ್ಷಕ್ಕೆ ಬಂದ

 

ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ ತಂಗಿ 

ಇವನಂತ ಚೆಲ್ವರಿಲ್ಲ ನೋಡು ಬಾರೇ ||ಪ||


ಒಂದೇ ಕೈಲಾಜನಕ ಪೋಲ ಕಾಣೆ

ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಾಣೆ |

ನಂದಿಯ ಕೋಲು ಪತಾಕೆ ಕಾಣೆ

ಮತ್ತೊಂದೊಂದು ಪದದ ಶೌರ್ಯ ಕಾಣೆ ||ಶಿವನು||


ಮೈಯೆಲ್ಲಾ ಹಾವಿನ ಮೊತ್ತ ಕಾಣೆ

ಬಲದ ಕೈಯಲಿ ಹಿಡಿದ ನಾಗರ ಬೆತ್ತ ಕಾಣೆ |

ವೈಯಾರ ಮೂರು ಲೋಕ ಕರ್ತ ಕಾಣೆ

ತಕ ತೈಯ ತೈಯಾನಂದಕ್ಕ  ಕಾಣೆ ||ಶಿವನು||


ಮನೆಮನೆ ದಪ್ಪಲಿ ಧಿಮ್ಮಿಸಾಲೆ

ಆತ ಹಣವನ್ನು ಕೊಟ್ರು ಒಲ್ಲನಂತೆ ಕಾಣೆ |

ತಣಿವನ್ನು ನೀಡಬೇಕಂತೆ ಕಾಣೆ

ಗೌರಿ ಮನಸ ಬಿಟ್ಟಿರಲಾರನಂತೆ ಕಾಣೆ ||ಶಿವನು||

Comments

Popular Posts