ಅಂಬಿಗಾ ನಾ ನಿನ್ನ

 

ಅಂಬಿಗಾ ನಾ ನಿನ್ನ ನಂಬಿದೇ

ಜಗದಂಬರಮಣ ನಿನ್ನ ನಂಬಿದೇ ||ಪ ||


ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಛಿದ್ರವು ಅಂಬಿಗಾ

ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾ  || ಅಂಬಿಗಾ ||


ಹೊಳೆಯ ಭರವ ನೊಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ

ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ || ಅಂಬಿಗಾ||


ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ

ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ || ಅಂಬಿಗಾ ||


ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ

ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ || ಅಂಬಿಗಾ ||

Comments

Popular Posts