ಯಾರೇ ರಂಗನ

 

ಯಾರೇ ರಂಗನ ಯಾರೇ ಕೃಷ್ಣನ        || ಪ ||
ಯಾರೇ ರಂಗನ  ಕರೆಯ ಬಂದವರು  || ಅ.ಪ ||

ಗೋಪಾಲ ಕೃಷ್ಣನ, ಪಾಪ ವಿನಾಶನ  |
ಈ ಪರಿಯಿಂದಲಿ ಕರೆಯ ಬಂದವರು      || ೧ ||

ವೇಣು ವಿನೋದನ, ಪ್ರಾಣ ಪ್ರಿಯನ |
ಜಾಣೆಯರಸರನ ಕರೆಯ ಬಂದವರು    || ೨ ||

ಕರಿರಾಜ ವರದನ, ಪರಮಪುರುಷನ |
ಪುರಂದರ ವಿಠಲನ ಕರೆಯ ಬಂದವರು   || ೩ || 

Comments

Popular Posts