ಪಿಳ್ಳಂಗೋವಿಯ
ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ, ರಂಗನ ಎಲ್ಲಿ ನೋಡಿದಿರಿ ||ಪ||
ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರೆ ||ಅ.ಪ||
ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪಬಾಲರ ವೃಂದವೃಂದದಲಿ
ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ ||ಪಿಳ್ಳಂ||
ಈ ಚರಾಚರದೊಳಗೆ ಅಜಂಡಾದ ಆಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಅಚ್ಚ ಪೀಠದಲಿ
ನಾಚದೆ ಮಾಧವ ಎಂಬ ವಾಚಕಂಗಳಲಿ
ವೀಚುಕೊಂಡದ ಪುರಂದರವಿಠಲನ ಲೋಚನಾಗ್ರದಲಿ ||ಪಿಳ್ಳಂ||
Comments
Post a Comment