ಇವಳೇ ವೀಣಾ ಪಾಣಿ


ಇವಳೇ ವೀಣಾ ಪಾಣಿ ವಾಣಿ |

ತುಂಗಾ ತೀರ ವಿಹಾರಿಣಿ, ಶೃಂಗೇರಿ ಪುರ ವಾಸಿನಿ ||ಪ||


ಶಾರದಾ ಮಾತೆ ಮಂಗಳದಾತೆ ಸುರ ಸಂಸೇವಿತೆ ಪರಮ ಪುನೀತೆ |

ವಾರಿಜಾಸನ ಹೃದಯ ವಿರಾಜಿತೆ, ನಾರದ ಜನನಿ ಸುಜನ ಸಂಪ್ರಿತೇ ||ಇವಳೇ|| 


ಆದಿ ಶಂಕರ ಅರ್ಚಿತೇ ಮಧುರೆ, ನಾದ ಪ್ರಿಯೆ ನವಮಣಿ ಮಯ ಹಾರೆ |

ವೇದಾಖಿಲ ಶಾಸ್ತ್ರ ಆಗಮ ಸಾರೆ, ವಿದ್ಯಾ ದಾಯಿನಿ ಯೋಗ ವಿಚಾರೆ ||ಇವಳೇ|| 


 


Comments

Popular Posts