ನಂಬಿದೆ ನಿನ್ನ ನಾಗಾಭರಣ

 

ನಂಬಿದೆ ನಿನ್ನ ನಾಗಾಭರಣ

ಕಾಯೋ ಕರುಣಾಮಯ ನನ್ನ||ಪ||


ನಿನ್ನೀ ನಾಮವು ಒಂದೇ

ನೀಗಿಸಬಲ್ಲದು ಬಾಧೆ|

ತನುಮನ ಜೀವನ ಪಾವನವಯ್ಯ

ಶಂಭೋ ಎನ್ನಲು ಇಲ್ಲ ಭಯ||ನಂಬಿದೆ||


ಬಾಡದ ಹೂವಿನ ಮಾಲೆ

ಬಾಗಿತು ಪಾದದ ಮೇಲೆ|

ಪ್ರೇಮಮಯ ನಿನಗೆ ಜಯ|

ನನ್ನ ಜೀವನ ನಿನ್ನಲಿ ತನ್ಮಯ

ಬಾಳಿನ ಹಾದಿಯ ಬೆಳಗಯ್ಯ ||ನಂಬಿದೆ||


ಲೋಕವ ಕಾಯುವ ಸ್ವಾಮಿ

ಭಿಕ್ಷೆಯ ಬೇಡಿದ ಪ್ರೇಮಿ|

ಭಸ್ಮಮಯ ಬಿಲ್ವಪ್ರಿಯ|

ನನ್ನೀ ದೇಹವು ನಿನ್ನಯ ಆಲಯ

ಸೇವಾ ಭಾಗ್ಯವ ನೀಡಯ್ಯ||ನಂಬಿದೆ||

Comments

Popular Posts