ಭಾಗ್ಯವ ಕೊಡೆ ಗರತಿ
ಭಾಗ್ಯವ ಕೊಡೆ ಗರತಿ ಭಾಗೀರಥಿ|
ಭಾಗ್ಯವ ಕೊಡೆ ಗರತಿ ಭಾಗೀರಥಿ||ಪ||
ಹರಿಪಾದ ನಖದಿಂದ
ಹರಿದು ಬಂದಳೆ ಗಂಗ|
ಪರಮ ಭಕ್ತರ ಸಂಗ
ವರವನ್ನೆ ಕೊಡು ತುಂಗ||ಭಾಗ್ಯವ||
ಕಾಶಿ ಪಟ್ಟಣದಲ್ಲಿ
ವಾಸವಾಗಿರುತಿ ನೀ|
ಈಶಾಧ್ಯರಿಗೆ ಮಹಾವರವನ್ನೆ ಕೊಡುತಿ||ಭಾಗ್ಯವ||
ಕಮಲೇಶ ವಿಠ್ಠಲನ
ಮಮತೆಯ ಮಗಳೆ|
ಉತ್ತಮ ಗರತಿ ಎಂದು
ಭ್ರಮಿಸಿ ಬಂದಳು ತಾಯೆ||ಭಾಗ್ಯವ||
Comments
Post a Comment