ಇಂದು ಶುಕ್ರವಾರ
ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ ||ಪ||
ಮುಂಜಾನೆಯ ಮಡಿಯುಟ್ಟು,ಕುಂಕುಮವ ಹಣೆಗಿಟ್ಟು|
ರಂಗೋಲಿಯನು ಬಾಗಿಲಿಗಿಟ್ಟು,
ಹಣ್ಣುಕಾಯಿ ನೀಡುವ ವಾರ ||ಇಂದು||
ಮಲ್ಲಿಗೆ ಜಾಜಿ ಹೂಮಾಲೆ ಹಾಕಿ,ಚಂದನ ಹಚ್ಚಿ ಸಿಂಗಾರ ಮಾಡಿ|
ಕರ್ಪೂರದಾರತಿ ನಿನಗೆ ಬೆಳಗಿ
ಭಕ್ತಿಯಿ೦ದಲಿ ಭಜಿಸುವ ವಾರ ||ಇಂದು||
ಸುವಾಸಿನಿಯರಿಗೆ ಕುಂಕುಮ ಹಚ್ಚಿ,ಸಂಭ್ರಮದಿ೦ದ ಬಾಗಿನ ನೀಡಿ|
ಸರ್ವ ಮಂಗಲೆಯ ಕೀರ್ತಿಯ ಹಾಡಿ
ಸಕಲ ಭಾಗ್ಯವ ಬೇಡುವ ವಾರ ||ಇಂದು||
Comments
Post a Comment