ಕಂಡೆನಾ ಗೋವಿಂದನ

 

ಕಂಡೆನಾ ಗೋವಿಂದನ ಗೋವಿಂದನ
ಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ || ಪ ||

ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ |
ಸಾಸಿರ ನಾಮದ ಶ್ರೀ ಹೃಷಿಕೇಶನ
ಶೇಷಶಯನ ನಮ್ಮ ವಸುದೇವ ಸುತನ ||ಕಂಡೆನಾ ||

ಮಾಧವ ಮಧುಸೂದನ ತ್ರಿವಿಕ್ರಮನ
ಯಾದವ ಕುಲ ಉದ್ಧಾರಕನ |
ವೇದಾಂತ ವೇದ್ಯನ ಇಂದಿರಾ ರಮಣನ
ಆದಿಮೂರುತಿ ಪ್ರಹ್ಲಾದ ವರದನಾ || ಕಂಡೆನಾ||

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ಜನ ರಕ್ಷಕನ |
ಕರುಣಾಕರ ನಮ್ಮ ಪುರಂದರ ವಿಠಲನ
ನೆರೆ ನಂಬಿ ದೆನು ಬೇಲೂರ ಚೆನ್ನಿಗನ || ಕಂಡೆನಾ || 

Comments

Popular Posts