ದಯಮಾಡೋ ರಂಗ

 ದಯಮಾಡೋ ರಂಗ ದಯಮಾಡೊ
ದಯಮಾಡೋ ನಿನ್ನ ದಾಸನು ನಾನೆಂದು||ಪ||

ಹಲವು ಕಾಲದಿ ನಿನ್ನ ಹಂಬಲ ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ||ದಯ||

ಇಹಪರಗತಿ ನೀನೇ ಇಂದಿರಾರಮಣ
ಸಹಾಯ ನಿನ್ನದೇ ತೋರಿ ಕರುಣ||||ದಯ||


ಕರಿರಾಜವರದನೇ ಕಾಮಿತ ಫಲದ
ಪುರಂದರ ವಿಠಲ ಹರಿಸಾರ್ವಭೌಮ||ದಯ||

Comments

Popular Posts