ಮರುಳು ಮಾಡಿಕೊಂಡೆಯಲ್ಲೇ

 

ಮರುಳು  ಮಾಡಿಕೊಂಡೆಯಲ್ಲೇ  ಮಾಯಾದೇವಿಯೇ ।

ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ ।।ಪ।।


ಪ್ರಳಯ ಕಾಲದಲ್ಲಿ ಆಲದೆಲೆಯ  ಮೇಲೆ  ಮಲಗಿದ್ದಾಗ 

ಹಲವು ಆಭರಣಗಳು  ಜಲವು ಆಗಿ ಜಾಣತನದಿ ।।ಮರುಳು।।


ಸರ್ವಸಂಗ ಬಿಟ್ಟು ಸನ್ಯಾಸಿಯಾದ ಕಾಲಕ್ಕೂ 

ಸರ್ವದ  ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ ।।ಮರುಳು।।


ಎಡಕೆ ಭೂಮಿ ಬಲಕೆ  ಶ್ರೀಯು ಎದುರಿನಲ್ಲಿ ದುರ್ಗಾದೇವಿ 

ತೊಡೆಯ  ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಪ್ಪಂತೆ ।।ಮರುಳು।।


ಮಕ್ಕಳ  ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 

ಪೊಕ್ಕುಳೊಳು ಮಕ್ಕಳ ಪಡೆದು ಕಕ್ಕುಲಾತಿ ಪಡುವಂತೆ ।।ಮರುಳು।।


ಎಂದೆಂದಿಗೂ ಮರೆಯೆ ನಿನ್ನ ಆನಂದದಿ ಜನರಿಗೆಲ್ಲ 

ತಂದು ತೋರೆ  ಸ್ವಾಧೀನ ಪುರಂದರ ವಿಠ್ಠಲ ರಾಯನ ।।ಮರುಳು।।

Comments

Popular Posts