ಗುಮ್ಮನ ಕರೆಯದಿರೆ
ಗುಮ್ಮನ ಕರೆಯದಿರೆ|
ಅಮ್ಮ ನೀನು' ಗುಮ್ಮನ ಕರೆಯದಿರೆ ||ಪ||
ಸುಮ್ಮನೆ ಇದ್ದೇನು| ಅಮ್ಮಿಯ ಬೇಡೆನು|
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ ||ಅ||
ಹೆಣ್ಣುಗಳಿರುವಲ್ಲಿಗೆ, ಹೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ |
ಚಿಣ್ಣರ ಬಡಿಯೆನು , ಅಣ್ಣನ ಬೈಯೆನು|
ಬೆಣ್ಣೆಯ ಬೇಡೆನು ,ಮಣ್ಣು ತಿನ್ನುವುದಿಲ್ಲ ||ಗುಮ್ಮ||
ಬಾವಿಗೆ ಹೋಗೆ ಕಣೆ, ಅಮ್ಮ ನಾನು ಹಾವಿನೊಳಾಡೆ ಕಣೆ|
ಆವಿನ ಮೊಲೆಯೂಡೆ , ಕರುಗಳ ಬಿಡೆ ನೋಡೆ |
ದೇವರಂತೆ ಒಂದು ಠಾವಿಲಿ ಕೂಡುವೆ ||ಗುಮ್ಮ||
ಜಗದೊಡೆಯ ಶ್ರೀ ಪುರಂದರವಿಠಲನ |
ಬಿಗಿದಪ್ಪಿಕೊಂಡಳು, ಮೋಹದಿಂದಾಗ ||ಗುಮ್ಮ||
Comments
Post a Comment