ಓ ಎನ್ನು ಬಾ ಗಣಪಾ

 

ಓ ಎನ್ನು ಬಾ ಗಣಪಾ ಕರೆದಾಗ

ಓ ಎನ್ನು ಬಾ ಗಣಪಾ||ಪ|| 


ಓಂಕಾರ ನಾದಲೋಲ ಹೇ ಗಣಪಾ

ಓಂಕಾರ ರೂಪ ಹೇ ಗಣಪಾ ||ಅ ಪ||


ಮಾಯ ವಿನಾಶಕ ಮೂಷಿಕ ವಾಹನ

ಮಾತಾ ಭವಾನಿ ಪಾರ್ವತಿ ನಂದನ |

ಮಹಾಗಣಪತೇ ಪರಮ ದಯಾಘನ 

ಶಂಭೋ ನಂದನ ಕರೆವೆನು ನಾ  ||ಓ || 


ಗಜಮುಖದವನೇ ಗಣಗಳಿಗೊಡೆಯ

ಮೊದಲ ಪೂಜೆಯನು ಪಡೆಯುವ ದೇವನೇ |

ಆತ್ಮಲಿಂಗವನು ಧರೆಯಲಿ ಇಟ್ಟವನೆ

ಬಾಲ ಗಣೇಶನೇ ಕರೆವೆನು ನಾ  ||ಓ ||


Comments

Popular Posts