ಶರಣು ಸಿದ್ದಿ ವಿನಾಯಕ

 

ಶರಣು ಸಿದ್ದಿ ವಿನಾಯಕ ಶರಣು ವಿದ್ಯಾ ಪ್ರದಾಯಕ  ||ಪ||


ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ||ಅ ಪ|| 


ನಿಟಿಲನೇತ್ರನೆ ದೇವಿ ಸುತನೆ ನಾಗಭೂಷಣ ಪ್ರಿಯನೇ

ತಟಿಲ ತಾಂಕಿತ ಕೋಮಲಾಂಗನೇ ಕರ್ಣ ಕುಂಡಲ ಧಾರಣೆ ||ಶರಣು|| 


ಬಟ್ಟ ಮುತ್ತಿನ ಪದಕ ಹಾರನೆ ಬಾಹು ಹಸ್ತ ಚತುಷ್ಟನೇ

ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧಾರನೆ ||ಶರಣು|| 


ಕುಕ್ಷಿಮಹಾಲಂಬೋಧರನೇ ಇಕ್ಷುಚಾಪನ ಗೆಲಿದನೆ

ಪಕ್ಷಿವಾಹನ ಶ್ರೀ ಪುರಂದರ ವಿಠ್ಠಲನ ನಿಜ ದಾಸನೇ ||ಶರಣು||


Comments

Popular Posts