ಶರಣು ಶರಣು ಜಯ ದುರ್ಗೆ

 

ಶರಣು ಶರಣು ಜಯ ದುರ್ಗೆ

ಸರ್ವ ಶಕ್ತಿ ಜಗನ್ಮಾತೆ|

ಶರಣು ಶರಣು ಶಿವೆ ಗೌರಿ

ರಕ್ಷಿಸೆಮ್ಮ ಸುಖದಾತೆ ||ಪ||


ಮಂಗಳವಾರ ಸುಮಂಗಲಿಯರು 

ನಿನ್ನಯ ನಾಮವ ಭಜಿಸಿರಲು|

ಒಂಭತ್ತು ವಾರ ವೃತವಿರಲು

ದೊರಕುವುದು ಇಷ್ಟಾರ್ಥಗಳು ||ಶರಣು||

|

ರಕ್ಷಿಸುವವಳು ನೀನೇ 

ಶಿಕ್ಷಿಸುವವಳು ನೀನೇ |

ಅಣು ಅಣುವೆಲ್ಲಾ ತುಂಬಿಹೆ ನೀನು 

ಕೋರಿಕೆ ಕರುಣಿಸು ಕಾಮಧೇನು  ||ಶರಣು||


ಜಯ ಶಿವೆ ಶಂಕರಿ ಜಯ ಅಭಯಂಕರಿ

ಜಯ ಜಯ ಶಕ್ತಿ ಜಯ ಪ್ರಳಯಂಕರಿ |

ಜಯ ಶಿವೆ ಶಾಂಭವಿ ಜಯ ನಟ ಭೈರವಿ 

ಜಯ ಕಾದಂಬರಿ ಜಯ ಶ್ವೇತಾಂಬರಿ  ||ಶರಣು||


ಜಯ ಮಾತಂಗಿನಿ ಆನಂದದಾಯಿನಿ 

ಜಯ ಜಗದಂಬೆ ಪುಣ್ಯ ಸ್ವರೂಪಿಣಿ |

 ಓಂ ಜಗಜನನಿ ಮಾತಾಭವಾನಿ 

ಓಂಕಾರೇಶ್ವರ ಚಿತ್ತ ನಿವಾಸಿನಿ  ||ಶರಣು||





Comments

Popular Posts