ಏನು ಧನ್ಯಳೋ ಲಕುಮಿ

 

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ|

ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು||ಪ|| 


ಕೋಟಿ ಕೋಟಿ ಭೃತ್ಯರಿರಲು  ಹಾಟಕಾಂಬರನ ಸೇವೆ |

ಸಾಟಿಯಿಲ್ಲದೆ ಮಾಡಿ  ಪೂರ್ಣ ನೋಟದಿಂದ ಸುಖಿಸುತಿಹಳು ||ಏನು|| 


ಛತ್ರ ಚಾಮರ ವ್ಯಜನ ಪರಿಯಂಕ  ಪಾತ್ರ ರೂಪದಲ್ಲಿ ನಿಂತು |

ಚಿತ್ರ ಚರಿತನಾದ ಹರಿಯ  ನಿತ್ಯ ಸೇವೆ ಮಾಡುತಿಹಳು ||ಏನು|| 


ಸರ್ವಸ್ಥಳದಿ  ವ್ಯಾಪ್ತನಾದ  ಸರ್ವ ದೋಷರಹಿತನಾದ |

ಸರ್ವ ವಂದ್ಯನಾದ ಪುರಂದರ ವಿಟ್ಟಲನ್ನ ಸೇವಿಸುವಳು||ಏನು||

Comments

Popular Posts