ನಾ ನಿನ್ನ ದಾಸನಯ್ಯ
ನಾ ನಿನ್ನ ದಾಸನಯ್ಯ ಸೀತಾರಾಮ ನಾ ನಿನ್ನ ದಾಸನಯ್ಯಾ
ನಾನು ನಿನ್ನಯ್ಯ ದಾಸನಹುದು ನೀನು ಈ ಜಗಧೀಶನಹುದು
ಬಾನುಕೋಟಿ ಪ್ರಕಾಶನೆ ಸಂಗೀತನಾದ ವಿನೋದ ರಂಗಾ||ನಾ ನಿನ್ನ||
ಮತಿಹೀನ ನಾನಾದೆನೆ, ಶಾಶ್ವತ ಸದ್ಗತಿಯ ನೋಡದೆ ಪೋದೆನೆ
ಹಿತವ ಪಾಲಿಸಬೇಕು, ಶ್ರೀ ಪತಿತ ಪಾವನ ರಂಗನಾಯಕ |
ಸತಿ ಶಿರೋಮಣಿ ಪರಮ ಸೀತಾಪತಿಯ ನಾಮದ ಸುತನು ಕಾಣೆ ||ನಾ ನಿನ್ನ||
ಕಂದಯ್ಯಗಾರು ಗತಿ, ನಿನ್ನಯ ಚೆಲ್ವ ಚೆಂದಪಾದವೆ ಶ್ರತಿ
ಹಿಂದೆ ಮಾಡಿದ ಪಾಪವೆಲ್ಲ ಮುಂದೆ ಬಾರದಂತೆ ಅರಿಯೆ ||
ಇಂದಿರೇಶ ಮುಕುಂದ ಪರಮಾನಂದ ಕುಲಶ್ರೀ ರಾಮದೇಶಿಕ||ನಾ ನಿನ್ನ||
Comments
Post a Comment