ಲಾಲಿಸಿದಳು ಮಗನ

 

ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ                                        ||ಪ||

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ              ||ಲಾಲಿ||

ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ್ಮೇಲೆ ಮಲಗೆಂದು     ||ಲಾಲಿ||

ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರವಿಠಲನ               ||ಲಾಲಿ|| 

Comments

Popular Posts