ಮಧುಕರ ವೃತ್ತಿ
ಮಧುಕರ ವೃತ್ತಿ ಎನ್ನದು, ಬಲು ಚೆನ್ನದು || ಪ ||
ಪದುಮನಾಭನ ಪಾದ, ಪದುಮ ಮಧುಪವೆಂಬ || ಅನು ಪಲ್ಲವಿ ||
ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ
ಆಲಾಪಿಸುತ ಬಲು ಓಲಗ ಮಾಡುವಂಥ ||ಮಧು ||
ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃಂಗಾರ ನೋಡುತ್ತ ಕಂಗಳಾನಂದವೆಂಬ || ಮಧು ||
ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿಂದ ಆನಂದ ಪಡುವಂಥ || ಮಧು ||
Comments
Post a Comment