ಗಜವದನ ಬೇಡುವೆ

 

ಗಜವದನ ಬೇಡುವೆ  ಗೌರೀತನಯ |

ತ್ರಿಜಗವಂದಿತನೆ ಸುಜನರ ಪೊರೆವನೆ ||

ಗಜವದನ ಬೇಡುವೆ ಗೌರೀತನಯ |

ಗಜವದನ ಬೇಡುವೆ ||ಪ||


ಪಾಶಾಂಕುಶಧರ ಪರಮಪವಿತ್ರ |

ಮೂಷಿಕವಾಹನ ಮುನಿಜನಪ್ರೇಮ ||ಗಜ ||


ಮೋದದಿ ನಿನ್ನಯ ಪಾದವ ತೋರೋ|

ಸಾಧುವಂದಿತನೆ ಆದರದಿಂದಲಿ ||

ಸರಸಿಜನಾಭ ಶ್ರೀ ಪುರಂದರವಿಠಲನ|

ನಿರುತ ನೆನೆಯುವಂತೆ ದಯ ಮಾಡೋ ||ಗಜ||


Comments

Popular Posts