ಗಜಮುಖನೆ ಗಣಪತಿಯೇ

 

ಗಜಮುಖನೆ ಗಣಪತಿಯೇ ನಿನಗೆ ವಂದನೆ |

ನಂಬಿದವರ ಪಾಲಿನ ಕಲ್ಪತರು ನೀನೆ ||ಪ|| 


ಭಾದ್ರಪದ ಶುಕ್ಲದ ಚೌತಿಯಂದು 

ನೀ ಮನೆಮನೆಗೂ ದಯಮಾಡಿ ಹರಸು ಎಂದೂ |

ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು

ಬೇಡುವಾ ಭಕ್ತರಿಗೆ ನೀ ದಯಾಸಿಂಧು|| ಗಜ || 


ಈ ಏಳು ಲೋಕದ ಅಣು ಅಣುವಿನ 

ಇಹಪರದಾ ಸಾಧನಕೆ ನೀ ಕಾರಣ |

ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ 

ನೀಡಿದರೆ ಸಾಕಯ್ಯ ಜನ್ಮ ಪಾವನ || ಗಜ ||

 

ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ 

ಪಾಲಿಸುವ ಪರದೈವ ಬೇರೆ ಕಾಣೆ |

ಪಾಪದ ಪಂಕದಲಿ ಪದುಮ ಎನಿಸು ಎನ್ನ 

ಪಾದಸೇವೆ ಒಂದೇ ಧರ್ಮಸಾಧನ || ಗಜ ||



Comments

Popular Posts