ಎಲ್ಲಿ ನಿನ್ನ ಭಕ್ತರೋ
ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ ||ಪ||
ಪೂಜೆ ನಡೆವ ಮನೆಗಳೇ ಎಂದೂ ಪರಮಪಾವನ
ಧ್ಯಾನಗೈವ ಮನಗಳೇ ನಿನ್ನಾ ಬೃಂದಾವನ|
ನಿನ್ನ ಅರಿತ ಹೃದಯವೇ ದೇವನಿರುವ ಮಂದಿರ
ನಿನ್ನ ಬೆರೆವ ಭಾಗ್ಯವೇ ನಿತ್ಯ ಸತ್ಯ ಸುಂದರ ।।ಎಲ್ಲಿ||
ನಿನ್ನ ಕಾಣುವಾಸೆಯೇ ಪೂರ್ವ ಜನ್ಮ ಪುಣ್ಯವು
ನಿನ್ನ ನಂಬಿ ನಡೆವುದೇ ಬಾಳಿನಲ್ಲಿ ಭಾಗ್ಯವು|
ನಿನ್ನ ನಾಮಸ್ಮರಣೆಯೇ ದಿವ್ಯ ವೇದ ಮಂತ್ರವು
ನಿತ್ಯ ನಿನ್ನ ಸೇವೆಯೇ ಮುಕ್ತಿ ಪಡೆವ ತಂತ್ರವು ।।ಎಲ್ಲಿ||
Comments
Post a Comment