ನೋಡು ನೋಡು ಕಣ್ಣಾರ

 

ನೋಡು ನೋಡು ಕಣ್ಣಾರ ನಿಂತಿಹಳು

ನಗು ನಗುತ ಚಾಮುಂಡಿ ನಿಂತಿಹಳು|

ತಾಯಿ ಹೃದಯ ತಂದಾ, ತುಂಬು ಮಮತೆ ಇಂದಾ

ಬಾ ಇಲ್ಲಿ ಓ ಕಂದ ಎನುತಿಹಳು

ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು || ನೋಡು ||

 

ಮೈಸೂರು ನಗರದ ಬೆಟ್ಟದ ಮೇಲೆ

ಮಹಿಸಾಸುರ ಮರ್ಧಿನಿಯ ವೈಭವ ಲೀಲೆ|

ಧನುಜ ಸಂಹಾರಿಣೀ, ತ್ರಿಭುವನ ಪೋಷಿಣಿ

ಶಂಕರನ ರಾಣಿಗೀವ ಹೂಗಳ ಮಾಲೆ || ನೋಡು || 

 

ನಂಬಿರುವ ಭಕ್ತರ ರಕ್ಷೆಗಾಗಿ, ನಂಬದಿಹ ದುಷ್ಟರ ಶಿಕ್ಷೆಗಾಗಿ

ನಂಬಿರುವ ಭಕ್ತರ ರಕ್ಷೆಗಾಗಿ, ನಂಬದಿಹ ದುಷ್ಟರ ಶಿಕ್ಷೆಗಾಗಿ|

ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ

ಕರುನಾಡ ಮಕ್ಕಳ ಹಿರಿ ದೈವವಾಗಿ|| ನೋಡು ||

 

ಉಕ್ಕಿ ಬಹ ನದಿಯಲ್ಲಿ ಅವಳ ನಗೆ

ಬೀಸಿ ಬಹ ಗಾಳಿಯಲಿ ಅವಳುಸಿರು|

ಹಸಿ ಹಸಿರು ಪೈರುಗಳೇ ಅವಳುಡುಗೆ

ಆ ತಾಯಿ ರೂಪವೋ ಹಲವು ಬಗೆ|| ನೋಡು ||

 

Comments

Popular Posts