ಆಡ ಪೋಗುವ
ಆಡ ಪೋಗುವ ನೀ ಬಾರೋ ರಂಗ, ಆಡ ಪೋಗುವ|
ಆಡ ಪೋಗುವ ಬಾರೋ ರಂಗ ಕೂಡಿ ಯಮುನೆ ತೀರದಲ್ಲಿ|| ಪ||
ಜಾಹ್ನವಿಯ ತೀರವಂತೆ, ಜನಕರಾಯನ ಕುವರಿಯಂತೆ
ಜಾನಕಿಯ ವಿವಾಹವಂತೆ, ಜಾಣ ನೀ ಬರಬೇಕಂತೆ || ಆಡ ||
ಕುಂಡಲಿಯ ನಗರವಂತೆ, ಭೀಷ್ಮರಾಯನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ, ನಿನಗೆ ಓಲೆ ಬರೆದಳಂತೆ || ಆಡ ||
ಪಾಂಡವರು ಕೌರರಿಗೆ, ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ, ರಂಗ ವಿಠಲ ಬರಬೇಕಂತೆ || ಆಡ ||
Comments
Post a Comment