ಆನೆ ಬಂತಾನೆ ಬಂತಾನೆ

 

ದಾನವ ಕದಳಿಯ ಕಾನನ ಮುರಿಯುತ            

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ  ||ಪ||


ಗುಂಗುರು ಗುರುಳ ನೀಲಾಂಗ ಚೆಲ್ವಾನೆ

ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ |

ಬಂಗಾರದಣುಗಂಟೆ ಶೃಂಗಾರದಾನೆ

ಮಂಗಳ ತಿಲಕದ ರಂಗನೆಂಬಾನೆ                    ||ಆನೆ||


ಕೆಳದಿ ಗೋಪಿಯರೊಳು ಗೆಳೆತನದಾನೆ

ಸುಲಭದಿಂದಲಿಯುವ ಎಳೆಮರಿ ಆನೆ |

ಘಲಿರುಘಲಿರುರವದಿ ನಲಿದಾಡೋ ಆನೆ

ಮಲೆತವರೆದೆಮ್ಯಾಲೆ ತುಳಿದಾಡೋ ಆನೆ         ||ಆನೆ||


ನಳಿನಜಭವರಿಗೆ ಸಿಲುಕದ ಆನೆ

ಒಲವಿಂದ ಭಕುತರ ಸಲಹುವ ಆನೆ |

ಹಲವು ಕವಿಗಳಿಗೆ ನಿಲುಕದ ಆನೆ

ಬಲ ಪ್ರಸನ್ವೆಂಕಟ ನಿಲಯನೆಂಬಾನೆ               ||ಆನೆ||

Comments

Popular Posts