ಬಾರೋ ಬೇಗ ಬಾರೋ
ಬಾರೋ ಬೇಗ ಬಾರೋ ನೀಲಮೇಘ ವರ್ಣ ।
ಬಾರೋ ಬೇಗ ಬಾರೋ ವೇಲಾಪುರದ ಚೆನ್ನ ।।ಪ।।
ಇಂದಿರಾರಮಣ ಗೋವಿಂದ ಬೇಗ ಬಾರೋ
ನಂದನ ಕಂದ ಮುಕುಂದ ಬೇಗ ಬಾರೋ ।।ಬಾರೋ।।
ಧೀರ ಉದಾರ ಗಂಭೀರ ಬೇಗ ಬಾರೋ
ಹಾರಾಲಂಕಾರ ರಘುವೀರ ಬೇಗ ಬಾರೋ |
ಋದ್ಧ ಸಮೃದ್ಧ ಅನಿರುದ್ಧ ಬೇಗ ಬಾರೋ
ಹದ್ದನೇರಿದ ಪ್ರಸಿದ್ಧ ಬೇಗ ಬಾರೋ ।।ಬಾರೋ।।
ರಂಗ ಉತ್ತುಂಗ ನರಸಿಂಗ ಬೇಗ ಬಾರೋ
ಮಂಗಳಮಹಿಮ ಶುಭಾಂಗ ಬೇಗ ಬಾರೋ |
ಅಯ್ಯ ವಿಜಯ ಸಹಾಯ್ಯ ಬೇಗ ಬಾರೋ
ಹಯದ್ರಿವಾಸ ಹಯವದನ ಬೇಗ ಬಾರೋ ।।ಬಾರೋ।।
Comments
Post a Comment