ಇದೇ ರಾಮ ನಾಮ

 

ಇದೇ ರಾಮ ನಾಮ 

ಪರಮ ಪುಣ್ಯ ನಾಮ ||

ಪರಮಾತ್ಮ ಧ್ಯಾನ ಶ್ರೀ ರಾಮ , ಶ್ರೀರಾಮ |

ಪರಮಾತ್ಮ ಧ್ಯಾನ ಶ್ರೀರಾಮ || ಪ ||


ಶಿಲೆಯ ಮೆಟ್ಟಿ ವನಿತೆಯ ಗೈದ 

ಶಿವ ಧನುಸನು ಮುರಿದ ರಾಮ|

ಶಕ್ತಿಶಾಲಿ ರಾವಣನನ್ನು ಸಂಹರಿಸಿ ಮೆರೆದನೆ ರಾಮ |

ಜನನ ಮರಣ ಒಂದೇ ಎಂದು

ಸಾರಿ ಸಾರಿ ಹೇಳಿದ ರಾಮ || ಇದೇ ||


ಚಂದ್ರಕಾಂತ ಮೆಚ್ಚಿದ ರಾಮ 

ಜಾಂಬವಂತ ಜಪಿಸಿದ ರಾಮ |

ಸುಗ್ರೀವ ಸಾರಿದ ರಾಮ 

ತಾಯಿ ಶಬರಿ ಹಾಡಿದ ರಾಮ |

ಹರಿಯು ಹರನು ಒಂದೇ ಎಂದು 

ಸಾರಿ ಸಾರಿ ಹೇಳಿದ ರಾಮ || ಇದೇ ||


Comments

Popular Posts