ಕೃಷ್ಣ ನೀ ಬೇಗನೇ ಬಾ
ಕೃಷ್ಣ ನೀ ಬೇಗನೇ ಬಾ |
ಬಾರೋ ಮುಖವನ್ನು ತೋರೋ ||
ಮುಖವನ್ನು ತೋರೋ ಕೃಷ್ಣ ಬೇಗನೆ ಬಾರೋ||ಪ||
ಮುಖವನ್ನು ತೋರೋ ಕೃಷ್ಣ ಬೇಗನೆ ಬಾರೋ||ಪ||
ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ
ನೀಲವರ್ಣನೆ ನಾಟ್ಯವಾಡುತ್ತ ಬಾರೋ ||ಕೃಷ್ಣ||
ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲ||ಕೃಷ್ಣ||
ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಶಿದ ಶ್ರೀ ಗಂಧ ಮೈಯೊಳು ಗಮ ಗಮ||ಕೃಷ್ಣ||
ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ||ಕೃಷ್ಣ||
Comments
Post a Comment